ಪ್ರಿಪೇಡ್ ಆಟೋ ಬಳಸಿ! ಪ್ರಯಾಣಿಕರಿಗೆ ಸಿಪಿಐ ದೇವರಾಜ್ ಖಡಕ್ ಸೂಚನೆ
ಪ್ರಿಪೇಡ್ ಆಟೋ ಸೌಲಭ್ಯ ಬಳಸಿಕೊಳ್ಳಿ: ಸಿಪಿಐ ದೇವರಾಜ್ ಶಿವಮೊಗ್ಗ: ರೈಲ್ವೆ ನಿಲ್ದಾಣ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಲ್ಪಿಸಿರುವ ಪ್ರಿಪೇಡ್ ಆಟೋ ಸೌಲಭ್ಯವನ್ನು ಸಾರ್ವಜನಿಕರು ಕಡ್ಡಾಯವಾಗಿ ಬಳಸಿಕೊಳ್ಳಬೇಕು ಎಂದು ಸಂಚಾರಿ ಪೊಲೀಸ್ ನಿರೀಕ್ಷಕರಾದ ದೇವರಾಜ್ ಮನವಿ ಮಾಡಿದ್ದಾರೆ. ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂಚಾರಿ ಪೊಲೀಸ್ ನಿರೀಕ್ಷಕ ದೇವರಾಜ್ ಅವರು, ತಮ್ಮ 20ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರಲ್ಲಿ ಪ್ರಿಪೇಡ್ ಆಟೋ ಕುರಿತು ಅರಿವು ಮೂಡಿಸಿದರು. ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಪ್ರಿಪೇಡ್ ಆಟೋ ಸೌಲಭ್ಯವಿದ್ದರೂ, ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಬೆಳಗಿನ ಜಾವ 5.30ರವರೆಗೆ ಮೀಟರ್ ದರದ ಒಂದೂವರೆ ಪಟ್ಟು ಹಣ ಪಡೆಯಲು ಅವಕಾಶವಿದ್ದರೂ, ಕೆಲವು ಚಾಲಕರು ನಿಯಮ ಮೀರಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸರು ಕೇವಲ 20 ನಿಮಿಷಗಳ ಅವಧಿಯಲ್ಲಿ 115 ಪ್ರಯಾಣಿಕರು ಪ್ರಿಪೇಡ್ ಆಟೋ ಸೌಲಭ್ಯ ಪಡೆಯುವಂತೆ ಕ್ರಮ ಕೈಗೊಂಡರು. ಅದೇ ರೀತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯೂ ಪರಿಶೀಲನೆ ನಡೆಸಲಾಗಿದ್ದು, ಕೇವಲ ಒಂದು ಗಂ...