ಜಿಲ್ಲಾಧಿಕಾರಿ ಕಚೇರಿ ಎದುರೇ ತಹಶೀಲ್ದಾರ್ ಜೀಪ್ಗೆ ಕಾರು ಡಿಕ್ಕಿ!
ಜಿಲ್ಲಾಧಿಕಾರಿ ಕಚೇರಿ ಎದುರೇ ತಹಶೀಲ್ದಾರ್ ಜೀಪ್ಗೆ ಕಾರು ಡಿಕ್ಕಿ!
ಶಿವಮೊಗ್ಗ: ಜಿಲ್ಲಾಧಿಕಾರಿಗಳ ಕಚೇರಿ ಎದುರೇ ತಹಶೀಲ್ದಾರ್ ಅವರ ಜೀಪ್ಗೆ ಐ-20 ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಘಟನೆ ವೇಳೆ ಕಾರು ಚಾಲಕ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿದ್ದ ಎನ್ನಲಾಗಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳೀಯರ ಮಾಹಿತಿ ಪ್ರಕಾರ, ಕಾರು ಚಾಲಕ ಓವರ್ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ತಹಶೀಲ್ದಾರ್ ಜೀಪ್ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ಚಾಲಕನ ಮೇಲೆ ಯಾರೋ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಹೇಳಿದರೆ, ಮತ್ತೊಂದೆಡೆ ತಹಶೀಲ್ದಾರ್ ಜೀಪ್ ಚಾಲಕನೇ ಹೊಡೆದಿದ್ದಾನೆ ಎಂಬ ಮಾತುಗಳು ಸ್ಥಳದಲ್ಲಿ ಕೇಳಿಬಂದಿವೆ.
ಆದರೆ ಕಾರು ತಹಶೀಲ್ದಾರ್ ಜೀಪ್ಗೆ ಡಿಕ್ಕಿ ಹೊಡೆದಿರುವುದು ಹಾಗೂ ಕಾರು ಚಾಲಕ ಮದ್ಯಪಾನ ಮಾಡಿದ್ದ ಸ್ಥಿತಿಯಲ್ಲಿದ್ದ ಎನ್ನುವುದು ಸ್ಥಳದಲ್ಲಿದ್ದವರಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು, ಚಾಲಕನನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಕೆಳಗಿಳಿಯಲು ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಚಾಲಕನಿಗೆ ಯಾರಿಂದ ಹಲ್ಲೆ ನಡೆದಿದೆ ಎಂಬುದು ಸೇರಿದಂತೆ ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ವರದಿ ನದೀಮ್ ಕೆ ಎಂ




Comments
Post a Comment