ಶಾಂತಿನಗರದ 18 ಯುವಕರಿಂದ ಕಾಂಗ್ರೆಸ್ಗೆ ಬಿಗ್ ಎಂಟ್ರಿ! ಹೆಚ್.ಸಿ. ಯೋಗೇಶ್ ನಾಯಕತ್ವಕ್ಕೆ ಭರ್ಜರಿ ಬೆಂಬಲ!
ಶಾಂತಿನಗರದ 18 ಯುವಕರು ಕಾಂಗ್ರೆಸ್ ಸೇರ್ಪಡೆ
ಶಿವಮೊಗ್ಗ: ನೂತನ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಸಿ. ಯೋಗೇಶ್ ಅವರ ನಾಯಕತ್ವವನ್ನು ಮೆಚ್ಚಿ ಶಾಂತಿನಗರದ ಸುಮಾರು 18 ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಂಘಟನೆಯ ಪ್ರಮುಖರಾದ ಮೋಸಿನ್ ಖಾನ್ ಅವರ ಮುಂದಾಳತ್ವದಲ್ಲಿ ಈ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, 4ನೇ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಂ. ಮಹದೇವ ಅವರ ನೇತೃತ್ವದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಸಿ. ಯೋಗೇಶ್ ಅವರು ಮೋಸಿನ್ ಖಾನ್ ಸೇರಿದಂತೆ 18 ಯುವಕರಿಗೂ ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಲಪ್ಪ, ಕಾಂಗ್ರೆಸ್ ಮುಖಂಡರಾದ ಎಸ್.ಪಿ. ದಿನೇಶ್, INTUC ಘಟಕದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಕವಿತಾ ಪ್ರಿಯಾ, ಮುಖಂಡರಾದ ರಾಘವೇಂದ್ರ, ಫೈರೋಜ್, ಅಲ್ಲಾಭಕಾಶ್, ಗಣೇಶ್, ಸಿದ್ದು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಇತ್ತೀಚಿನ ಸಂದರ್ಭದಲ್ಲಿ ಹೆಚ್.ಸಿ. ಯೋಗೇಶ್ ಹೇಳಿರುವುದಾಗಿ ವರದಿಯಾಗಿದೆ.
ವರದಿ ನದೀಮ್ ಕೆ ಎಂ


Comments
Post a Comment