ಶಿವಮೊಗ್ಗದಲ್ಲಿ Medical Icons ಪ್ರಸಾದ ವಿನಿಯೋಗ! ಒಗ್ಗಟ್ಟು, ಸೇವಾ ಮನೋಭಾವಕ್ಕೆ ಸಾಕ್ಷಿಯಾದ ಕಾರ್ಯಕ್ರಮ
ಶಿವಮೊಗ್ಗ: ಒಗ್ಗಟ್ಟು ಮತ್ತು ಸೇವಾ ಮನೋಭಾವ ಮೆರೆದ Medical Icons ಕುಟುಂಬ
ಶಿವಮೊಗ್ಗ: ಶುಕ್ರವಾರ ನಡೆದ Medical Icons ಕುಟುಂಬದ ಪ್ರಸಾದ ವಿನಿಯೋಗ ಕಾರ್ಯಕ್ರಮವು ಆತ್ಮೀಯ ಹಾಗೂ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ದಾನಿಗಳು ಹಾಗೂ ಸ್ನೇಹಿತರು ಒಗ್ಗಟ್ಟಿನಿಂದ ಭಾಗವಹಿಸಿ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ಕೈಜೋಡಿಸಿದರು.
ಗೌರವ ಅಧ್ಯಕ್ಷರಾದ ಹೇಮಣ್ಣ, ಅಧ್ಯಕ್ಷರಾದ ಮಂಜುನಾಥ್ ಎಂ.ಎಲ್., ಉಪಾಧ್ಯಕ್ಷರಾದ ಜಯರಾಜ್ ಹಾಗೂ ಸತೀಶ್, ಕಾರ್ಯದರ್ಶಿ ಮಂಜುನಾಥ್ ಬಿ., ಸಂಘಟನಾ ಕಾರ್ಯದರ್ಶಿ ಗುರುರಾಜ್ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾಗಿ ಸಹಕರಿಸಿದರು.
ಸದಸ್ಯರು ಹಾಗೂ ಸಹ ಕಾರ್ಯದರ್ಶಿಗಳು ಕೂಡ ಪ್ರಸಾದ ವಿತರಣೆ, ನೀರು, ಪ್ಲೇಟ್ಗಳ ವ್ಯವಸ್ಥೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸುವುದರ ಜೊತೆಗೆ ಸ್ವತಃ ಪ್ರಸಾದ ವಿತರಿಸಿ ಸೇವೆಯಲ್ಲಿ ಭಾಗಿಯಾದರು.
ADC ಡಾ. ವೀರೇಶ್ ಬಾಬು, ಮಧುಕರ್ ಸರ್, ಷಡಾಕ್ಷರಿ C.S., ಭುವನೇಶ್ವರಿ ಪಾಟೀಲ್, ಮಾಧವ ರಾವ್ ಸರ್ ಹಾಗೂ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.ಕಜಾನ್ಚಿ ಗಿರೀಶ್
ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಚಂದ್ರಿಕಾ ಅವರು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರು. ರುಚಿಯಾದ ಪ್ರಸಾದವನ್ನು ಸಿದ್ಧಪಡಿಸಿದ ರಾಘವೇಂದ್ರ ಬಟ್ಟರು ಅವರಿಗೂ ಸಂಘಟನೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಯಶಸ್ಸಿನ ಹಿಂದೆ ಸಹಕರಿಸಿದ ಪ್ರತಿಯೊಬ್ಬ ದಾನಿ, ಸದಸ್ಯರು ಹಾಗೂ ಸೇವಾ ಮನೋಭಾವದಿಂದ ಕೈಜೋಡಿಸಿದ ಎಲ್ಲರಿಗೂ Medical Icons ಕುಟುಂಬದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮ ದ ಪ್ರತಿಯೊಬ್ಬರ ಕೊಡುಗೆಯನ್ನು ಮುಕ್ತವಾಗಿ Medical Icons ನ ಖಜಾಂಚಿ ಯವರಾದ ಗಿರೀಶ್ ಮಸರೂರು ರವರು ನಮ್ಮೊಂದಿಗೆ ಹಂಚಿಕೊಳ್ಳುವುದರ ಮೂಲಕ ಮತ್ತೊಮ್ಮೆ ಎಲ್ಲರಿಗೂ ನಮ್ಮ ಚಾನಲ್ ಮುಖಾಂತರ ಅಭಿನಂದನೆಗಳನ್ನ ತಿಳಿಸಿದರು..
ಒಟ್ಟಿನಲ್ಲಿ, ಶುಕ್ರವಾರದ ಕಾರ್ಯಕ್ರಮವು ಕೇವಲ ಪ್ರಸಾದ ವಿನಿಯೋಗವಾಗಿರದೆ, Medical Icons ಕುಟುಂಬದ ಸ್ನೇಹ, ಒಗ್ಗಟ್ಟು ಮತ್ತು ಸೇವಾ ಮನೋಭಾವವನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.
ವರದಿ ನದೀಮ್ ಕೆ ಎಂ




Comments
Post a Comment