ಹಿಂಡ್ಲೆಮನೆಯಲ್ಲಿ ಚಿರತೆ ದಾಳಿ..! 2 ವರ್ಷದ ಕರು ಸಾವು

 ಚಿರತೆ ದಾಳಿಗೆ ಕರು ಬಲಿ: ಹಿಂಡ್ಲೆಮನೆ ಗ್ರಾಮಸ್ಥರಲ್ಲಿ ಆತಂಕ




ಹೊಸನಗರ: ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ವರ್ಷದ ಕರು ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.


ಹಿಂಡ್ಲೆಮನೆಯ ಶ್ರೀಮತಿ ಎಂಬುವರಿಗೆ ಸೇರಿದ ಎರಡು ವರ್ಷದ ಕರುವನ್ನು ಎಂದಿನಂತೆ ಮೇಯಲು ಬಿಟ್ಟಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ. ಕರುವಿನ ಗಂಟಲಿನ ಭಾಗಕ್ಕೆ ಚಿರತೆ ಗಂಭೀರವಾಗಿ ಗಾಯಗೊಳಿಸಿದೆ.


ಚಿರತೆಯ ದಾಳಿಯಿಂದ ತಪ್ಪಿಸಿಕೊಂಡ ಕರು ಹೇಗೋ ಮನೆ ಕಡೆಗೆ ಮರಳಿದೆ. ಆದರೆ ಗಂಟಲಿನ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ಕೆಲವೇ ಸಮಯದಲ್ಲಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.


ಕಳೆದ ಕೆಲವು ದಿನಗಳಿಂದ ಹಿಂಡ್ಲೆಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಇದೀಗ ಜಾನುವಾರು ಮೇಲೆ ದಾಳಿ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.


ಜನರು ಹಾಗೂ ಜಾನುವಾರುಗಳ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಚಿರತೆಯ ಚಲನವಲನ ಪತ್ತೆಹಚ್ಚಿ ಅಗತ್ಯ ಕ್ರಮ ಕೈಗೊಂಡು ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಮನೆಯ ಸುತ್ತಮುತ್ತ ಹಾಗೂ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರು ಪರಸ್ಪರ ಸೂಚಿಸುತ್ತಿದ್ದಾರೆ.


ಹಿಂಡ್ಲೆಮನೆ ಭಾಗದಲ್ಲಿ ಚಿರತೆಯ ಸಂಚಾರ ಮುಂದುವರಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.


ವರದಿ ನದೀಮ್ ಕೆ ಎಂ




Comments

Popular posts from this blog

ರಾಗಿಗುಡ್ಡದ ನ್ಯಾಯಬೆಲೆ ಅಂಗಡಿ ಮುಂದೆ ಸರ್ಕಾರಿ ಅಕ್ಕಿ ಖರೀದಿ? ಅಧಿಕಾರಿಗಳ ಪರಿಶೀಲನೆ ಅಗತ್ಯ

ಗಣಪತಿಗೆ ಹೂವಿನ ಹಾರ ಅರ್ಪಿಸಿ, ನೀರು ಮತ್ತು ಜ್ಯೂಸ್ ವಿತರಣೆ

ರಾಗಿಗುಡ್ಡದಲ್ಲಿ ಭಕ್ತಿಭಾವದ ಸಂದಲ್ ಶರೀಫ್: ಬರ್ಗಾಹ್-ಎ-ಹಜ್ರತ್ ಖ್ವಾಜಾ ಸಯ್ಯದ್ ಶಾಹ್ ಅಬ್ದುಲ್ ಖಾದರ್ ಮೊಹಮ್ಮದ್ ಮೊಹಮ್ಮದ್ ಉಲ್ ಅಲ್ ಹಾಶ್ಮಿ ವಲ್ ಹುಸೈನಿ ಲಿಂಗ್ ಬಂಧ್ ಜಗದ್ಗುರು (ರಹ್ಮತುಲ್ಲಾಹಿ ಅಲೈಹಿ) ಸಾಹೇಬ್, ಪೀರ್ ಖಲೀಫಾ-ಎ-ಅವ್ವಲ್ ಹಜ್ರತ್ ಪೀರ್ ಮೊಹಮ್ಮದ್ ಖಾಲಿಕ್ ಅಲಿ ಶಾಹ್ ಚಿಷ್ಟಿ ಉಲ್ ಕಾದ್ರಿ (ರಹ್ಮತುಲ್ಲಾಹಿ ಅಲೈಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ